ಕೀರ್ತಿ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಮಲ್ಲಮ್ಮ ವಿ ಸುಬ್ರಮಣ್ಯ ನಿರ್ಮಿಸುತ್ತಿರುವ ಇಷ್ಟಾರ್ಥ ಚಿತ್ರಕ್ಕೆ ನಾನೋಡೋ ನೋಟದಲ್ಲಿ ನೀ ದೇವರಾಗಿ ಕಾಣ್ತೀಯಾ ಈ ಹಾಡನ್ನು ಸಕಲೇಶಪುರದ ಸುತ್ತಮುತ್ತ ನಾನೇ ಫೈಲ್ ನನ್ ಲವ್ವೇ ಫೈಲ್ ಈ ಗೀತೆ ಮಂಗಳೂರು ಸುತ್ತಮುತ್ತ ಸಮುದ್ರ ತೀರದಲ್ಲಿ ಚಿತ್ರೀಕರಣವಾಯಿತು. ಬರುವುದಾದರೆ ಬಾ ಬಲಗಾಲಿಟ್ಟು ಬಾ ಈ ಹಾಡನ್ನು ಹೊಸಕೋಟೆ ಕೋಲಾರ ಸುತ್ತಮುತ್ತ ನಡೆದಿದೆ. ಯಾವ ಜನ್ಮದ ಶಾಪವೋ ಕಾಣೆ, ಯಾವ ಜನ್ಮದ ಪಾಪವೋ ಕಾಣೆ ಈ ಗೀತೆ ಕಿಕ್ಕೇರಿ ಸುತ್ತಮುತ್ತ ನಡೆದಿದೆ. ನಾಯಕ ನಾಯಕಿ ಅಭಿನಯದಲ್ಲಿ ಜಗ್ಗು ನೃತ್ಯ ನಿರ್ದೇಶನದಲ್ಲಿ ಈ ನಾಲ್ಕು ಗೀತೆಗಳ ಚಿತ್ರೀಕರಣ ನಡೆಯಿತು. ಪ್ರಾಣ್ ನಿರ್ದೇಶನದ ಚಿತ್ರಕ್ಕೆ ಛಾಯಾಗ್ರಹಣ -ಸೆಲ್ವಂ, ಸಂಗೀತ -ಮಧುರ, ಸಹ ನಿರ್ದೇಶನ - ದುರ್ಗ ಪ್ರಸಾದ್, ಸಾಹಸ-ಅಲ್ಟಿಮೆಟ್ ಶಿವು, ಕ್ಲಾಸಿಕ್ ರವಿ, ಸಂಕಲನ - ಕುಮಾರ್, ನೃತ್ಯ - ರಾಜೇಶ್ ಬ್ರಹ್ಮಾವರ್, ಜಗ್ಗು, ನಿರ್ವಹಣೆ- ರವಿ, ತಾರಾಗಣದಲ್ಲಿ ವಿಜಯ ಸುಬ್ರಮಣ್ಯ, ಶ್ರೀಪ್ರಿಯ, ಸತ್ಯಜಿತ್, ಶೋಭಾರಾಣಿ, ಸುಫಾಕಾಲ್, ಕುಮಾರ್ ಅಣಿ ಚೌಡೇನಹಳ್ಳಿ, ಸುಧಾಕರ್ ಆಲಿಜಾನ್ ಮತ್ತು ಅರವಿಂದ್ ಮುಂತಾದವರಿದ್ದಾರೆ.